ಪ್ರೀತಿಯಲಿ ಹಾಡುವೆ ನಿನಗೋಸ್ಕರ
ಪ್ರೀತಿಯಲಿ ಹಾಡುವೆ ನಿನಗೋಸ್ಕರ
ಪ್ರೀತಿಯಲಿ ಹಾಡುವೆ ನಿನಗೋಸ್ಕರ
ಹೋ... ಮನಸಿನೊಳಗೆ ಮನಸು ಬೆಸೆಯೊ
ಆರಂಭದ ಹೆಜ್ಜೆಯಲಿ ಬಂದು ಕುಳಿತೆ
ಹೋ... ಹೃದಯದೊಳಗೆ ಹೃದಯ ಹೊಸೆಯೊ
ಪ್ರತಿಬಂಧದ ಅನುಬಂಧದ ಮಾತು ಕಲಿತೆ
ನಿನ್ನ ಒಂದು ಮಧುರ ಸ್ಪರ್ಶ ನನ್ನೆದೆ ಕವಿತೆ
ಪ್ರತಿ ಪ್ರೇಮಸಾಲಿನಲ್ಲು ಗೆದ್ದು ಸೋತೆ
ನಾಕೂ ದಿಕ್ಕಿನಲ್ಲೂ ಸಿಕ್ಕುತಿಲ್ಲ ಉತ್ತರ
ಪ್ರೀತಿಯಲಿ ಹಾಡುವೆ ನಿನಗೋಸ್ಕರ
ಹೇ... ನೆನಪುಗಳಿಗು ಕನಸುಗಳಿಗು
ಈ ಪ್ರೀತಿಯೆ ಸುಖ ಸೇತುವೆ ಅನ್ನುತಾರೆ
ಹೇ... ಎಲ್ಲೊ ಹುಟ್ಟಿ ಎಲ್ಲೊ ಬೆಳೆಯೊ
ಪ್ರತಿಯೊಬ್ಬರ ಪ್ರತಿ ಪ್ರೀತಿಯು ನಿಂತ ನೀರೆ
ಇಲ್ಲಿ ಭಾವನೆಗಳ ಕುಂಚ ಹಿಡಿದಿದೆ ಹೃದಯ
ಸ್ಪಂದಿಸುವ ಚಿತ್ರ ಮಾತ್ರ ಎಲ್ಲಿ ಮಾಯ
ನಾಲ್ಕು ಪ್ರೇಮಗೀತೆಗಿಲ್ಲಿ ಒಂದೇ ಅಕ್ಷರ
ಪ್ರೀತಿಯಲಿ ಹಾಡುವೆ ನಿನಗೋಸ್ಕರ