ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯಲ್ಲ ರಂಗಾಯ್ತು ಯಾಕೆ ಬೆಡಗಿ
ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯಲ್ಲ ರಂಗಾಯ್ತು ಯಾಕೆ ಬೆಡಗಿ
ನೀನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ
ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
ಯಾಕೆ ಹಿಂಗಾಯ್ತು ಹೇಳೇ ಹುಡುಗೀ
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ
ನಾನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ
ನೀ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
ಯಾಕೆ ಹಿಂಗಾಯ್ತು ಅಂತ ಗೊತ್ತೇ ಇಲ್ಲ
ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯಲ್ಲ ರಂಗಾಯ್ತು ಯಾಕೆ ಬೆಡಗಿ
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ
————————————————————————————————
ಕುಡಿ ಮೀಸೆ ಮ್ಯಾಲೈತೆ ನೂರಾರು ಆಸೆ
ಕಣ್ಣ್ ನೋಡಿದ್ರೆ ತಿಳಿಯಲ್ವಾ ಒಳ ಮನಸಿನ ಬಾಸೆ
ಪಾಂಕನ ಕುಡುದ್ರುನು ಬಾಯಾರಿಕೆ ಯಾಕೆ
ಮಜ್ಜಿಗೆ ಮಗ್ಲಲ್ಲಿದ್ರು ನನ್ ನೋಡ್ತಿ ಯಾಕೆ
ಪ್ರೀತಿಲಿ ನೀನಿಲ್ದಿದ್ರೆ ರುಚಿನೇ ಇಲ್ಲ ಕಣಮ್ಮಿ
ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯಲ್ಲ ರಂಗಾಯ್ತು ಯಾಕೆ ಬೆಡಗಿ
————————————————————————————————
ಮುಂಬಾರ ಹೆಚ್ಚಾಗಿ ಬಿಗಿದೈತೆ ರವಿಕೆ
ತಲೆ ದಿಂಬು ಬಿಸಿಯಾಗಿ ಹೇಳೈತೆ ಬಯಕೆ
ಬಯಕೆಗೆ ಬೇಕಂತೆ ಹುಳಿ ಮಾವಿನಕಾಯಿ
ಮದ್ವೆನೇ ಮುಗ್ದಿಲ್ಲ ತೆಗಿಬೇಡ ಬಾಯಿ
ಮದ್ವೆಗೆ ಮಂತ್ರ ಇಲ್ಲ ಸೋಬನಕ್ಕೆ ಸುಂಕ ಇಲ್ಲ
ಪ್ರೀತಿಲಿ ನೀನಿಲ್ದಿದ್ರೆ ರುಚಿನೇ ಇಲ್ಲ ಕಣಯ್ಯಾ
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ
ನನ್ ಮೈಯಲ್ಲ ರಂಗಾಯ್ತು ಯಾಕೆ ಹುಡುಗ
ನೀನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ
ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
ಯಾಕೆ ಹಿಂಗಾಯ್ತು ಹೇಳೇ ಹುಡುಗೀ