LyricFind Logo
LyricFind Logo
Profile image icon
Lyric cover art

Gandada Gudiyalli

Apple Music logo
Deezer logo
Spotify logo
Lyrics
ಗಂಧದ ಗುಡಿಯಲ್ಲಿ
ಗಿಡಗಳ ನೆಡೋಣ
ಹಸಿರಲ್ಲೇ ಎಲ್ಲರು
ಉಸಿರನು ಕಾಣೋಣ

ಭೂತಾಯಿಯ ಒಡಲನು
ತಣ್ಣಗೆ ಇಡೋಣ
ಮುಂದಿನ ಪೀಳಿಗೆಗೆ
ಒಳಿತನು ಕೋರೋಣ

ಗಾಳಿ ಮಳೆಗೆ ಗಿಡ-ಮರಗಳು ಬೇಕು
ನಿರ್ಲಕ್ಷ್ಯ ತೋರಿದ್ದು ಇನ್ನು ಸಾಕು
ನೀನು ನಮ್ಮೊಡನೆ ಹೆಜ್ಜೆ ಹಾಕು


ಗಂಧದ ಗುಡಿಯಲ್ಲಿ...||

ರೋಗ ರುಜಿನ ಬಾರದೆ ಇರಲು
ಆಸ್ಪತ್ರೆಯನ್ನು ಸೇರದೆ ಇರಲು
ಶುಧ್ದವಾಗಿರಲಿ
ನಮ್ಮೆಲ್ಲರ ಬಯಲು
ನಮ್ಮೆಲ್ಲರ ಒಡಲು

ಸ್ವಚ್ಚತೆಗೆ ಕೊಡಿ ಆದ್ಯತೆ
ಮಲೀನವ ದೂಡಿ ಆಚೆಗೆ

ಆರೋಗ್ಯವೇ ಭಾಗ್ಯ
ಎನ್ನುತಾ ನಡೆಯೋಣ
ನಾವು ನಾಳೆಯ ಕಟ್ಟೋಣ

ವಿದ್ಯೆಗಿಂತ ದೇವರಿಲ್ಲ
ಅದ ಮರೆತರೆ ಕ್ಷಮೆಯಿಲ್ಲ
ನಿಮ್ಮ ಮಕ್ಕಳನು ಶಾಲೆಗೆ ಸೇರಿಸಿ
ಬಂಧುಗಳೇ ನೀವೆಲ್ಲಾ..

ಗುರಿ ಇದ್ದರೆ ಮುಂದೆ
ಗುರುವಿದ್ದರೆ ಹಿಂದೆ
ಅನುಮಾನವೇ ಇಲ್ಲ
ನಾಳೆಯು ನಮದೇ
ನಡೆ ಮುಂದೆ..ನಡೆ ಮುಂದೆ
ನುಗ್ಗಿ ನುಗ್ಗಿ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ
ಹಿಗ್ಗಿ ಹಿಗ್ಗಿ ನಡೆ ಮುಂದೆ
ಗಂಧದಗುಡಿಯಲ್ಲಿ...||

WRITERS

YATHIRAJ

PUBLISHERS

Lyrics © IPRS

Share icon and text

Share


See A Problem With Something?

Lyrics

Other