ಮತ್ತೇಕೋ ಎದೆಯಂಚಲಿ ನೋವೊಂದು ಶುರುವಾಗಿದೆ
ಅದೇಕೋ ನಿನ್ನದೇ ನೆನಪೊಂದು ನನ ಕಾಡಿದೆ
ಒಂದು ಹಕ್ಕಿ ಆಗಸದಲ್ಲಿ ಏಕಾಂಗಿ ಹಾರಾಡಿದೆ
ಬರಿದಾದ ತನ್ನ ಗೂಡಿಗೆ ಮರಳಿ ಬರಲಾರದೆ
ನಿನಗಾಗಿ ಬರೆದಾ ನೂರಾರು ಪತ್ರ
ನೀ ಹೇಗಿರುವೆ ನಾ ಚೆನ್ನಾಗಿರುವೆ
ಮುಂದೆ ಬರೆಯಲು ಸಾಲು ಸಿಗದಾಗಿದೆ
ಅಲೆದಾಟ ಸಾಕಾಗಿದೆ ವಿಶ್ರಾಂತಿ ಬೇಕಾಗಿದೆ
ನೀ ಮತ್ತೆ ಸಿಗಬಾರದೇ ನೀ ಮತ್ತೆ ಬರಬಾರದೇ
ಮತ್ತೇಕೋ ಎದೆಯಂಚಲಿ ನೋವೊಂದು ಶುರುವಾಗಿದೆ